ಏಷ್ಯಾ ಪ್ಯಾರಾ ಗೇಮ್ಸ್ 2022ರ ಚಿಹ್ನೆ ಅನಾವರಣ
================
ಚೀನಾದ ಹ್ಯಾಂಗ್‌ಝೌನಲ್ಲಿ 2022ಕ್ಕೆ ನಡೆಯಲಿರುವ 4ನೇ ಏಷ್ಯನ್ ಪ್ಯಾರಾ ಗೇಮ್ಸ್‌ನ ಅಧಿಕೃತ ಚಿಹ್ನೆ ಅನಾವರಣಗೊಂಡಿದೆ.
ಪವಿತ್ರ ಹಕ್ಕಿ (ಡಿವೈನ್ ಬರ್ಡ್) ಚಿಹ್ನೆ ಇದಾಗಿದ್ದು ಅತ್ಯಾಕರ್ಷಕವಾಗಿ ಮೂಡಿ ಬಂದಿದೆ. ಸಂಸ್ಕೃತಿಯ ಪ್ರತೀಕವಾಗಿ ಚಿಹ್ನೆಯನ್ನು ಅಳವಡಿಸಿಕೊಳ್ಳಲಾಗಿದೆ.
ಹ್ಯಾಂಗ್‌ಝೌವಿನ ಪರಂಪರೆಯನ್ನು ಪ್ರತಿನಿಧಿಸುವ ಚಿಹ್ನೆ ಇದಾಗಿದೆ ಎಂದು ಸಂಘಟಕರು ಹೇಳಿದ್ದಾರೆ.
2022ರ ಅಕ್ಟೋಬರ್ 9ರಿಂದ ಏಷ್ಯನ್ ಪ್ಯಾರಾ ಗೇಮ್ಸ್ ಆರಂಭವಾಗಲಿದೆ.
=================