ಸ್ಮಾರ್ಟ್ ಸ್ಟೆತಾಸ್ಕೋಪ್ ಅಭಿವೃದ್ಧಿಪಡಿಸಿದ ಬಾಂಬೆ ಐಐಟಿ, ಸಂಶೋಧನಾ ತಂಡದಿಂದ ಪೇಟೆಂಟ್
===============
ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ತಂಡವೊಂದು ಸ್ಮಾರ್ಟ್ ಸ್ಟೆತಾಸ್ಕೋಪ್ ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ಎದೆ ಮೇಲೆ ಇರಿಸದೆ ದೂರದಿಂದಲೇ ಹೃದಯದ ಬಡಿತ ಪರಿಶೀಲಿಸಬಹುದಾಗಿದೆ. ಇದರಿಂದಾಗಿ ಕರೊನಾದಂಥ ಸೋಂಕಿನ ಸಂದರ್ಭದಲ್ಲಿ ರೋಗಿಯ ಬಳಿ ಹೋಗದೆ ದೂರದಿಂದಲೇ ಪರಿಶೀಲಿಸುವುದರಿಂದ ವೈದ್ಯರು ಸೋಂಕು ತಗಲುವ ಭಯಮುಕ್ತರಾಗಿ ಕಾರ್ಯನಿರ್ವಹಿಸಬಹುದಾಗಿದೆ ಎಂದು ಬಾಂಬೆ ಐಐಟಿಯ ಸಂಶೋಧನಾ ತಂಡ ಹೇಳಿದೆ.
=============
ಈ ಸ್ಟೆತಾಸ್ಕೋಪ್ಗೆ ಸಂಶೋಧನಾ ತಂಡ ಪೇಟೆಂಟ್ ಕೂಡ ಪಡೆದುಕೊಂಡಿದೆ.
ದೇಹದ ಹೊರಗಿನ ಬೇರೆಲ್ಲಾ ಸದ್ದನ್ನು ನಿಯಂತ್ರಿಸಿ ಕೇವಲ ದೇಹದೊಳಗಿನ ಉಸಿರಾಟದ ಸದ್ದನ್ನು ಮಾತ್ರ ರವಾನಿಸುವುದು ಈ ಸ್ಟೆತಾಸ್ಕೋಪ್ನ ವಿಶೇಷತೆಯಾಗಿದೆ.
=============