46ರ ಹರೆಯದ ಚುರುಕಿನ ತರುಣ, BMW ಕಂಪನಿಯ ಭಾರತದ CEO ರುದ್ರತೇಜ್ ನಿಧನ!
===================
ವಯಸ್ಸು ಕೇವಲ 46, ಯುವಕರನ್ನೇ ನಾಚಿಸುವ ಉತ್ಸಾಹ. ಕಳೆದ ವರ್ಷವಷ್ಟೇ BMW ಕಾರು ಕಂಪನಿಯ ಭಾರತದ ಸಿಇಒ ಆಗಿ ಜವಾಬ್ದಾರಿ ವಹಿಸಿಕೊಂಡ ಚತುರ. ಆಟೋಮೊಬೈಲ್ ಇಂಡಸ್ಟ್ರಿ ಮಾರಾಟ ಕುಸಿತದಲ್ಲೂ BMWಗೆ ಹೆಚ್ಚಿನ ಹೊಡೆತ ಬೀಳದಂತೆ ನೋಡಿಕೊಂಡ ನಿಪುಣ, BMW ಕಾರು ಕಂಪನಿಯ ಭಾರತದ ಸಿಇಒ ರುದ್ರತೇಜ್ ಸಿಂಗ್ ಇಂದು(ಏ.20) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
================
2019ರ ಆಗಸ್ಟ್ ತಿಂಗಳಲ್ಲಿ ರುದ್ರತೇಜ್ ಸಿಂಗ್ ಭಾರತದ BMW ಕಂಪನಿ ಸೇರಿಕೊಂಡರು. ಇದಕ್ಕೂ ಮೊದಲು ರಾಯಲ್ ಎನ್‌ಫೀಲ್ಡ್ ಕಂಪನಿಯ ಗ್ಲೋಬಲ್ ಪ್ಲಸಿಡೆಂಟ್ ಆಗಿ ಕಾರ್ಯನಿರ್ವಹಿಸಿದ್ದರು. ಯನಿಲಿವರ್ ಇಂಡಿಯಾ ಕಂಪನಿಯಲ್ಲಿ 16 ವರ್ಷ ಸೇವೆ ಸಲ್ಲಿಸಿದ್ದಾರೆ. ಒಟ್ಟು 25 ವರ್ಷ ಅನುಭವ ಹೊಂದಿದ್ದ ರುದ್ರತೇಜ್ ಸಿಂಗ್ ಅವರನ್ನು 2019ರಲ್ಲಿ BMW ಇಂಡಿಯಾ ಆತ್ಮೀಯವಾಗಿ ಸ್ವಾಗತಿಸಿತ್ತು.
==================