★★ ಯುನೆಸ್ಕೋ ಪರಂಪರೆಯ ತಾಣಗಳು
# ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಭಾರತದಲ್ಲಿ 38 ವಿಶ್ವ ಪರಂಪರೆಯ ತಾಣಗಳನ್ನು ಗುರುತಿಸಿದೆ.
# ಯುನೆಸ್ಕೋ 2016 ರ ಜುಲೈ 15 ರಂದು ವಿಶ್ವ ಪರಂಪರೆಯ ತಾಣವಾಗಿ ಬಿಹಾರದ ನಳಂದ ವಿಶ್ವವಿದ್ಯಾಲಯವನ್ನು ಗುರುತಿಸಿದೆ.
# ನಳಂದ ವಿಶ್ವವಿದ್ಯಾನಿಲಯವನ್ನು ಸೇರಿದ ನಂತರ ಯುನೆಸ್ಕೋ ಚಂಡೀಗಢದ ಕ್ಯಾಪಿಟಲ್ ಕಾಂಪ್ಲೆಕ್ಸ್ ಮತ್ತು ಸಿಕ್ಕಿಂನ ಕಾಂಚನಜುಂಗಾ ರಾಷ್ಟ್ರೀಯ ಉದ್ಯಾನವನ್ನು ಸಹ ಪಟ್ಟಿಗೆ ಸೇರಿಸಿತು.
# ವಿಶ್ವದ ಮೂರನೇ ಅತಿ ಎತ್ತರದ ಪರ್ವತವಾದ – ಕಾಂಚನಜುಂಗಾ ಭಾರತದ ಏಕೈಕ ಮಿಶ್ರ ತಾಣವಾಗಿದೆ (ನೈಸರ್ಗಿಕ ಮತ್ತು ಸಾಂಸ್ಕೃತಿಕ ತಾಣ)
# 1972 ರಲ್ಲಿ ಸ್ಥಾಪನೆಯಾದ ಯುನೆಸ್ಕೊ – ಸಾಂಸ್ಕೃತಿಕ ಅಥವಾ ನೈಸರ್ಗಿಕ ಪರಂಪರೆಯ ಪ್ರಾಮುಖ್ಯತೆಯನ್ನು ಹೊಂದಿರುವ ಸ್ಥಳಗಳನ್ನು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುತ್ತದೆ.
# ಆಗ್ರಾ ಕೋಟೆ ಮತ್ತು ಅಜಂತಾ ಗುಹೆಗಳು 1983 ರಲ್ಲಿ ಯುನೆಸ್ಕೋ ಪರಂಪರೆ ತಾಣದ ಪಟ್ಟಿಗೆ ಸೇರಿಸಲಾದ ಭಾರತದ ಮೊದಲ ಎರಡು ತಾಣಗಳಾಗಿವೆ.
# ಈ 38 ತಾಣಗಳಲ್ಲಿ, 30 ಸಾಂಸ್ಕೃತಿಕ ತಾಣಗಳು, 7 ನೈಸರ್ಗಿಕ ತಾಣಗಳು ಮುತ್ತು ಒಂದು ಮಿಶ್ರತಾಣವಾಗಿದೆ.
● 2019 ರಲ್ಲಿ ಯುನೆಸ್ಕೊ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಕೊಂಡ ನಗರ ರಾಜಸ್ಥಾನದ ರಾಜಧಾನಿ – ಜೈಪುರ್