Hello Everyone Welcome to shrivardhantech.in
Heading : tet questions and answers
This is our official website. where you will get daily .current affairs,.i.e questions & answer with pdf file. Which are very much helpful and useful for upcoming all exams .KAS, IAS, UPSC, PSI, FDA, BANKING, SDA,Jobs, and all kpsc others Examinations. So keep visiting our official website. For daily very important updates which will help you in upcoming all examinations..
tet question paper click here
Topic/File Name | tet questions and answers Pdf Chiguru Gk Model Question Paper |
File Category | TET chiguru gk model question |
File Format | |
File Language | Kanndad/English/Hindi |
PDF Cost | FREE |
File/PDF Download link | Yes Available, Download link Given Below |
For Personal Use Only
Use e- paper to Save water and Save life’s.!!!!!!!
tet questions and answers | tet model questions and answers
ಓದು ಕಲಿಸುವ ಪದ್ದತಿಗಳು
1) ಅಕ್ಷರ ಮಾಲಾ ಪದ್ದತಿ
ಸಾಂಪ್ರಾದಾಯಿಕ ಪದ್ದತಿ ಎನಿಸಿರುವ ಇಲ್ಲಿ ಮೊದಲು ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಬಿಡಿಬಿಡಿಯಾಗಿ ಕಲಿಸಿ ನಂತರ ಓದನ್ನು ಕಲಿಸಲಾಗುವುದು
ನಂತರ ವಾಕ್ಯಗಳನ್ನು ಕಲಿಸಲಾಗುವುದು
ಈ ಪದ್ದತಿಯಲ್ಲಿ ಪ್ರತಿ ಅಕ್ಷರದ ರಚನೆ ವಿನ್ಯಾಸ , ಬರೆಯುವ ಕ್ರಮ, ಪ್ರತಿ ಅಕ್ಷರಕ್ಕೆ ಇರುವ ಧ್ವನಿಯನ್ನು ಹಾಗೂ ಉಚ್ಚಾರಣಾ ಕ್ರಮ ತಿಳಿಸಲಾಗುವುದು
ಕನ್ನಡದ ಪ್ರತಿಯೊಂದು ವರ್ಷಗಳಿಗೂ ಪ್ರತ್ಯೇಕ ಧ್ವನಿ ಇದೆ.
ಈ ಪದ್ದತಿಯಲ್ಲಿ ಮಗುವಿಗೆ ವರ್ಣಗಳನ್ನು ಪರಿಚಯ ಮಾಡಿ ಕೊಡಲಾಗುತ್ತದೆ.
ಈ ಪದ್ದತಿಯಲ್ಲಿ ಪದದ ಅರ್ಥವನ್ನು ಪರಿಗಣಿಸುವುದಿಲ್ಲ,
ಈ ಪದ್ದತಿಯಿಂದ ಮಕ್ಕಳಿಗೆ ಓದಿನ ಬಗೆಗೆ ಸ್ವಾಭಾವಿಕ ಅಭಿರುಚಿ ಉಂಟು ಮಾಡಲು ಸಾಧ್ಯವಿಲ್ಲ .
2) ಪದಮಾಲಾ ಪದ್ದತಿ
ಈ ಪದ್ದತಿಯಲ್ಲಿ ಮಕ್ಕಳಿಗೆ ಅಕ್ಷರಗಳನ್ನು, ಅವುಗಳ ಧ್ವನಿಗಳು, ಸ್ವರಗಳ ಪರಿಚಯ ಮಾಡುವುದರ ಬದಲಾಗಿ ಪದಗಳ ಉಚ್ಚಾರಣೆ ಮತ್ತು ಅರ್ಥವನ್ನು ತಿಳಿಸಿಕೊಡುವುದುರ ಮೂಲಕ ಓದು ಕಲಿಸುವುದೇ ಪದಮಾಲಾ ಪದ್ದತಿ ಎಂದು ಕರೆಯಲಾಗುತ್ತದೆ
ಈ ಪದ್ದತಿಯಲ್ಲಿ ಮೊದಲು ಸರಳ ಪದ ನಂತರ ಸಂಯುಕ್ತಗಳನ್ನು ಪರಿಚಯ ಮಾಡಿ ಕೊಡಲಾಗುತ್ತದೆ.
ಇಲ್ಲಿ ಮಕ್ಕಳಿಗೆ ಒತ್ತಕ್ಷರ ,ದೀರ್ಘಾಕ್ಷರ, ಅಮೂರ್ತ ಪದಗಳನ್ನು ಪರಿಚಯ ಮಾಡುವುದು
ಈ ಪದ್ದತಿಯಲ್ಲಿ ಮೊದಲ ಪದ ಅಥವಾ ಪದಗುಚ್ಚವನ್ನು ಪರಿಚಯ ಮಾಡಿ ನಂತರ ನಂತರ ಪ್ರತಿಯೊಂದು ವರ್ಣದ ಪರಿಚಯ ಮಾಡಿಕೊಡಲಾಗುವುದು..
ಮೊದಲು ಪದಗಳನ್ನು ಪರಿಚಯ ಮಾಡಿ ನಂತರ ಅ ಪದಗಳಲ್ಲಿರು ವಿವಿಧ ಅಕ್ಷರಗಳನ್ನು ಪರಿಚಯ ಮಾಡಿಕೊಡುವುದು..
ಇಲ್ಲಿ ಪ್ರತಿಯೊಂದು ಪದದ ಅರ್ಥ ,ಧ್ವನಿ ಉಚ್ಚಾರಣೆ ಕ್ರಮ ಕಳಿಸಿಕೊಎಲಾಗುವುದು
ಇಲ್ಲಿ ಪದಗಳ ನಂತರ ವಾಕ್ಯಗಳನ್ನು ಕಲಿಸಲಾಗುವುದು..
tet questions and answers
ಇಲ್ಲಿ ಕಾಗುಣಿತಾಂಶಗಳನ್ನು ಪರಿಚಯ ಮಾಡಿಸಬೇಕು
ಅಕ್ಷರ ಮಾಲಾ ಪದ್ದತಿಗಿಂತ ಪದಮಾಲಾ ಪದ್ದತಿ ಪರಿಣಾಮಕಾರಿ ಆಗಿದೆ.. (ವರ್ಣಮಾಲಾ ಪದ್ದತಿಗಿಂತ ಈ ಪದ್ದತಿ ಉತ್ತಮ ಆಗಿದೆ)
3) ವಾಕ್ಯಮಾಲಾ ಪದ್ದತಿ
ಈ ಪದ್ದತಿಯಲ್ಲಿ ಓದಗಾರಿಕೆಯನ್ನು ಅರ್ಥಬದ್ದವಾದ ವಾಕ್ಯಗಳಿಂದಲೇ ಪ್ರಾರಂಭಿಸಲಾಗುವುದು..
ವಾಕ್ಯಗಳಿಂದಲ್ಲೇ ಓದು ಕಲಿಸುವುದನ್ನು ವಾಕ್ಯ ಮಾಲಾ ಪದ್ದತಿ ಎಂದು ಕರೆಯಲಾಗುತ್ತದೆ..
ಮನಃ ಶಾಸ್ತ್ರೀಯಾಗಿ ಈ ಪದ್ದತಿಯಲ್ಲಿ ಮಕ್ಕಳು ಅರ್ಥಬದ್ದ ವಾಕ್ಯಗಳನ್ನು ಓದುತ್ತ ಗ್ರಹಿಸುವುದು
ಈ ಪದ್ದತಿಯಲ್ಲಿ ಮಕ್ಕಳು ಇಡೀ ವಾಕ್ಯವನ್ನು ಒಂದೇ ಬಾರಿ ಓದುವುದರಿಂದ ಅವರ ಉಚ್ಚಾರ ಸ್ವರ ಭಾರ ಉತ್ತಮವಾಗುವುದು
ಈ ಪದ್ದತಿಯಿಂದ ಮಕ್ಕಳಿಗೆ ಭಾವಪೂರ್ಣ ಓದು ಆಗುವುದು..
ಇಲ್ಲಿ ಮಕ್ಕಳು ಲೇಖನ ಚಿಹ್ನೆಗಳು, ವ್ಯಾಕರಣಾಂಶಗಳು ಅನುಸರಿಸಿಕೊಂಡು ಓದುತ್ತಾರೆ..
ಮಕ್ಕಳು ಬಾವಕ್ಕೆ ತಕ್ಕಂತೆ ಧ್ವನಿಗಳ ಏರಿಳಿತ ಅನುಸರಿಸಿಕೊಂಡು ವಾಕ್ಯಗಳನ್ನು ಓದುತ್ತಾರೆ..
ಪದಮಾಲಾ ಪದ್ದತಿಗಿಂತ ವಾಕ್ಯಮಾಲಾ ಪದ್ದತಿ ಉತ್ತಮ ಆಗಿದೆ..
4) ನೋಡಿ ಹೇಳುವ ಪದ್ದತಿ
ಈ ಪದ್ದತಿಯು ಮಾಂಟೆಸ್ಸರಿ ಹಾಗೂ ಪ್ರೊಬೆಲ್ ಅವರ ಬೋಧಾನ ತತ್ವದ ಆಧಾರದ ಮೇಲೆ ರೂಪಗೊಂಡಿದೆ
ಈ ಪದ್ದತಿಯಲ್ಲಿ ಮಕ್ಕಳಿಗೆ ಓದುವುದು ಚಟುವಟಿಕೆ ಮೂಲಕ ಕಲಿಸಲಾಗುವುದು
ಉದಾ :- ಬಣ್ಣದ ಚಾರ್ಟ್ ,ಮಾದರಿ ವಾಕ್ಯ ಪಲಕ , ಇತ್ಯಾದಿ..
ಈ ಪದ್ದತಿಯಲ್ಲಿ ಮಾದರಿ ಇಟ್ಟುಕೊಂಡು ಓದನ್ನು ಕಲಿಯುತ್ತಾರೆ
ಉದಾ ;- ಆ ಇದನ್ನೇ ನೋಡಿ ಬರೆಯುವುದೇ ನೋಡಿ ಹೇಳುವ ಪದ್ದತಿ ಆಗಿದೆ.
5) ಕಥಾ ಪದ್ದತಿ
ಉತ್ತಮ ಭಾವರೂಪದ ಜೀವಂತ ಸನ್ನೀವೇಶ ಆಗಿದೆ..
ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪುಟ್ಟ ಪುಟ್ಟ ಕಥೆಗಳನ್ನು ರಚನೆ ಮಾಡಿ ಸಂಭಾಷಣೆಯ ರೀತಿಯಲ್ಲಿ ಹೇಳುತ್ತಾ ಓದಿದರೆ ಮಕ್ಕಳು ಅನುಕರಣೆ ಮಾಡುತ್ತ ಓದುವುದನ್ನು ಕಲಿಯುತ್ತಾರೆ..
ಈ ಪದ್ದತಿಯಲ್ಲಿ ಅಗತ್ಯವಾದ ಸ್ವರಭಾರ, ಧ್ವನಿ ಏರಿಳಿತ, ಉಚ್ಚಾರ ಕ್ರಮವನ್ನು ಕಲಿಸಲಾಗುವುದು,
ಈ ಪದ್ದತಿಯಲ್ಲಿ ಮಕ್ಕಳಿಗೆ ಚಿತ್ರವನ್ನು ನೀಡಿ ನಂತರ ಅದೇ ಚಿತ್ರದ ಆಧಾರದ ಮೇಲೆ ಕಥೆ ಹೇಳಾಗುವುದು
ಮಕ್ಕಳು ಚಿತ್ರವನ್ನು ನೋಡಿ ಸುಲಭವಾಗಿ ಓದುವುದನ್ನು ಕಲಿಯುತ್ತಾರೆ..
ಇಲ್ಲಿ ಯಾಂತ್ರಿಕವಾಗಿರದೆ ಇದು ಸ್ವಯಂ ಆಸಕ್ತಿಯಿಂದ ಕೊಡಿರುವುದು..